ಸಾಮಾನ್ಯ ಜ್ಞಾನ
1) ಊಟ ಮಾಡಿದ ನಂತರ ನಿದ್ರೆ ಬರಲು ಕಾರಣವೇನು?
ಆಹಾರವು ಸಾಮಾನ್ಯವಾಗಿ ಕಾರ್ಬೋಹೈಡ್ರೇಟ್ ಗಳ ಸಮೃದ್ಧ ಆಕರಗಾಳಗಿವೆ.ಇವುಗಳ ಸೇವನೆ ನಂತರ ಜೀರ್ಣ ಪ್ರಕ್ರಿಯೆಯಲ್ಲಿ ಗ್ಲೋಕೋಸ್ ಆಗಿ ಪರಿವರ್ತನೆಯಾಗುತ್ತದೆ. ಇನ್ಸುಲಿನ ಪ್ರಮಾಣ ಹೆಚ್ಚಾಗುತ್ತದೆ.ಟ್ರಿಪ್ತೊಫನ್ ಕೊಬ್ಬಿನ ಆಮ್ಲ ಪ್ರವೇಶಿಸಲು ಪ್ರೇರೇಪಿಸುತ್ತದೆ.
ಇದು ಮೆಲಟೋನಿನ್ ಮತ್ತು ಸಿರೋಟೋನಿನ್ ಹಾರ್ಮೋನ್ ಗಳನ್ನು ಹೆಚ್ಚಿಸಲು ಕಾರಣವಾಗುತ್ತದೆ. ನಿದ್ರೆ ಸಂಭಂದಿಸಿದ ಹಾರ್ಮೋನಗಳಾಗಿವೆ.
2) ಪೇರಳೆ ಹಣ್ಣಿನ (ಜಾಪುಳಕಾಯಿ)ಪ್ರಯೋಜನಗಳು:
ಈ ಹಣ್ಣಿನಲ್ಲಿ ಜೀವಸತ್ವ "ಸಿ", ಲೈಕೋಪಿನ್ ಹಾಗೂ ಆಂಟಿ ಆಕ್ಸಿಡೆಂಟಗಳು ಹೇರಳವಾಗಿ ಕಂಡುಬರುತ್ತವೆ.
ಅ) ಮಧುಮೇಹಕ್ಕೆ ಸಹಾಯಕ:ಮಧುಮೇಹ ರೋಗಿಗಳಿಗೆ ಪೇರಳೆ ಹಣ್ಣು ಬಹಳ ಪ್ರಯೋಜನಕಾರಿಯಾಗಿದೆ.ಪೇರಳೆ ಹಣ್ಣು ನಿಯಮಿತವಾಗಿ ಸೇವಿಸುವುದರಿಂದ ಅದರಲ್ಲಿರುವ ಗ್ಲೈಸೆಮಿಗೆ ಇಂಡೆಕ್ಸ ಕಾರಣದಿಂದಾಗಿ ಮಧುಮೇಹ ನಿಯಂತ್ರಿಸಬಹುದು.
ಆ)ಮಲಬದ್ಧತೆ ನಿವಾರಣೆ:ಪೇರಳೆ ಹಣ್ಣಿನ ಬೀಜಗಳು ಜೀರ್ಣಕ್ರಿಯೆಯ ಸಮ್ ಸ್ಯೆಗಳನ್ನು ತೆಗೆದುಹಾಕಲು ಸಹಾಯ ಮಾಡುತ್ತದೆ. ಜೀರ್ಣಕ್ರಿಯೆ ಸರಿಯಾಗಿ ಮಲಬದ್ಧತೆ ಸಮಸ್ಯೆ ಕೂಡ ಇರುವುದಿಲ್ಲ.
ಇ)ರೋಗನಿರೋಧಕ ಶಕ್ತಿ ಹೆಚ್ಚಿಸುತ್ತದೆ: ಪೇರಳೆ ಹಣ್ಣಿನಲ್ಲಿ ಜೀವಸತ್ವ ʼಸಿʼ ಇರುವುದರಿಂದ ದೇಹದ ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತದೆ.
ಈ) ಕಣ್ಣಿನ ದೃಷ್ಟಿಗೆ ಸಹಾಯಕ: ಕಣ್ಣುಗಳನ್ನು ಆರೋಗ್ಯವಾಗಿಡಲು ಪೇರಳೆ ಹಣ್ಣನ್ನು ಅತ್ಯತ್ತುಮ ಹಣ್ಣು ಎಂದು ಪರಿಗಣಿಸಲಾಗಿದೆ. ಜೀವಸತ್ವ ʼಎʼ ಈ ಹಣ್ಣಿನಲ್ಲಿ ಕಂಡುಬರತ್ತದೆ.
Comments
Post a Comment