ಕರ್ನಾಟಕದ ವಿಜ್ಞಾನಿಗಳ

ಚಿಂತಾಮಣಿ ನಾಗೇಶ ರಾಮಚಂದ್ರರಾವ್


C N R RAO

    ಸಿ.ಎನ್ಆರ್.‌ ರಾವ ವಿಶ್ವ ವಿಖ್ಯಾತ ವಿಜ್ಞಾನಿಗಳಲೊಬ್ಬರು.  ಹನುಮಂತ ನಾಗೇಶರಾವ್‌ ಮತ್ತು ನಾಗಮ್ಮ ದಂಪತಿಗಳ ಮಗನಾದ ಪೊ. ಚಿಂತಾಮಣಿ ನಾಗೇಶರಾಮಚಂದ್ರರಾವ್ ಅವರು 1934, ಜೂನ್‌ 30 ರಂದು ಬೆಂಗಳೂರಿನಲ್ಲಿ ಜನಿಸಿದರು.

            ಶಿಕ್ಷಣ: ಆರು ವರ್ಷದವರಾಗಿದ್ದಾಗಲೆ ಮಾಧ್ಯಮಿಕ ಶಾಲೆಗೆ ಹೋಗಲರಾಂಭಿಸಿದರು.  ತರಗತಿಯಲ್ಲಿಯೆ ಅವರು ಚಿಕ್ಕವರಾಗಿದ್ದರೂ, ಸಹಪಾಠಿಗಳು ಹಿರಿಯರಾಗಿದ್ದರೂ ಇದು ಅವರ ಮೇಲೆ ಯಾವುದೇ ಪ್ರಭಾವ ಬೀರಲಿಲ್ಲ.  ಬೆಳೆಯುವ ಸಿರಿ ಮೊಳಕೆಯಲ್ಲಿ ಎಂಬಂತೆ ಅವರ ಪ್ರತಿಭೆಯು ತಮ್ಮ ವಯಸ್ಸಿಗೂ ಮೀರಿ ಗುರುತಿಸಿಕೊಂಡಿದ್ದರು.  ವಿಜ್ಞಾನ ವಿಷಯದ ಬಗ್ಗೆ ಇರುವ ಆಕರ್ಷಣೆ ಕೂಡಾ ಕಾರಣವಾಗಿತ್ತು.

ಮೈಸೂರು ರಾಜ್ಯದ ಲೋವರ್‌ ಸೆಕೆಂಡರಿ ಪರೀಕ್ಷೆಯಲ್ಲಿ (ಇಂದಿನ 7 ನೆಯ ತರಗತಿಗೆ ಸಮಾನದದ್ದು)  1944 ರಲ್ಲಿ ಪ್ರಥಮ ಶ್ರೇಣಿಯಲ್ಲಿ ತೇರ್ಗಡೆಯಾದರು.  ಪ್ರೌಢಶಾಲಾ ಶಿಕ್ಷಣವನ್ನು ಕನ್ನಡ ಮಾಧ್ಯಮದಲ್ಲಿಯೇ ಕಲಿತರು.  ಪ್ರೌಢ ಶಾಲೆಯಲ್ಲಿ ಶ್ರೇಷ್ಠ ಶಿಕ್ಷಕರಿದ್ದರು.  ರಸಾಯನಶಾಸ್ತ್ರದ ಶಿಕ್ಷಕರಾದ ಮಾನ್ಯ ಶಿವರುದ್ರಪ್ಪ, ಪಿ.ಎಸ್.‌ ನಾರಾಯಣರಾವ್, ಮಾನ್ಯ ಎಸ್.ಕೃಷ್ಣಮೂರ್ತಿಯವರು ಸಿ.ಎನ್. ಆರ್‌ ರಾವ್ ಅವರ ಮೇಲೆ ಗಾಢವಾದ ಪ್ರಭಾವ ಬೀರಿದರು.  ಮೈಸೂರು ರಾಜ್ಯದ ಎಸ್ಸೆಸ್ಸೆಲ್ಸಿ ಪರೀಕ್ಷೆಯನ್ನು 1947 ರಲ್ಲಿ ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣರಾದರು.

            1951 ರಲ್ಲಿ ಮೈಸೂರು ವಿಶ್ವವಿದ್ಯಾಲಯದಿಂದ ಬಿ.ಎಸ್ಸಿ. ಪದವಿಯನ್ನು ಪಡೆದರು.  ಸಿ.ಎನ್.ರಾವ್‌ ಅವರ ಮೇಲೆ ಪ್ರಭಾವ ಬೀರಿದ ವಿಜ್ಞಾನಿ ಸರ್.‌ ಸಿ.ವಿ. ರಾಮನ್.‌  ಸ್ನಾತಕೋತ್ತರ ಪದವಿಯನ್ನು ಬನಾರಸ್‌ ಹಿಂದೂ ವಿಶ್ವವಿದ್ಯಾಲಯದಿಂದ 1953 ರಲ್ಲಿ ಪಡೆದರು.  1958 ರಲ್ಲಿ ಪರ್ಡ್ಯೂ ವಿಶ್ವವಿದ್ಯಾಲಯದಿಂದ P.hd ಯನ್ನು ಪಡೆದರು.

            1959 ರಲ್ಲಿ ಬೆಂಗಳೂರಿನ ಭಾರತೀಯ ವಿಜ್ಞಾನ ಮಂದಿರದಲ್ಲಿ ಉಪನ್ಯಾಸಕರಾದರು.  ನಂತರ

1963 ರಲ್ಲಿ ಕಾನ್ಪುರದ IIT (Indian Institute of Technology)ಗೆ ಸೇರಿದರು.  ಇವರ “ರಾಸಾಯನಶಸ್ತ್ರದ ಸಾಲಿಡ್‌ ಸ್ಟೇಟ್‌ ಆಫ್ ಮತ್ತು ಮಟೇರಿಯಲ್‌ ವಿಭಾಗದ”  ಸಂಶೋಧನೆಯಿಂದ ವಿಶ್ವ ವಿಖ್ಯಾತಿಯಾದರು.  ಅಲ್ಲದೆ ಪ್ರಧಾನ ಮಂತ್ರಿಯವರ್‌ ವೈಜ್ಞಾನಿಕ ಸಲಾಹ ಮಂಡಳಿಯ ಅಧ್ಯಕ್ಷರಾಗಿದ್ದರು.

            ಜೆ.ಎಸ್.‌ ಆಂಡರ್‌ ಸನ್‌ ಆಕ್ಸಫರ್ಢ, ಜೆ.ಬಿ ಗುಡೆನಫ್, ಲಿ ರಾಯ ಎರಿಂಗ್‌ ಅರಿಜೋನ್‌, ಜೆ. ಎಂ. ಹೊನಿಂಗ್‌ ಪರ್ಡ್ಯೂ. ಇವರು ಘನಸ್ಥಿತ ರಾಸಾಯನ ಶಾಸ್ತ್ರದ ಮೇಲೆ ಉಪನ್ಯಾಸಗಳನ್ನು ನೀಡಿದರು.  ಈ ಉಪನ್ಯಾಸಗಳನ್ನು ಆಧರಿಸಿ ಸಿ.ಎನ್.‌ ಆರ್‌ ರಾವ್‌ ರು ಸಂಪಾದಿಸಿದ ಮೊದಲ ಪುಸ್ತಕ “ ಮಾರ್ಡನ್‌ ಆಸ್ಪೆಕ್ಟ ಆಫ್‌ ಸಾಲಿಡ್‌ ಸ್ಟೇಟ ಕೆಮಿಸ್ಟ್ರಿ” 1970 ರಲ್ಲಿ ಪ್ರಕಟವಾಯಿತು.  ಈ ವಿಷಯದಲ್ಲಿ  ಪ್ರಕಟವಾದ ಪ್ರಥಮ ಪುಸ್ತಕ ಇದಾಗಿತ್ತು.

            ಸಿ.ಎನ್. ಆರ್‌ ರಾವ್‌ ಅವರ ಪ್ರಮುಖ ಸಂಶೋಧನೆಗಳು ಅತಿವಾಹಕತೆ (super conductivity)  ಹಾಗೂ ಅತಿ ಪರಮಾಣು (nano particle) ಕುರಿತಾಗಿದೆ.  ಅತಿವಾಹಕತೆ ಎಂದರೆ ಕೆಲವೊಂದು ಘನವಸ್ತುಗಳ ತಾಪ ಪರಿವರ್ತನಿಯ ತಾಪಕ್ಕಿಂತ (transition temperature) ಕಡಿಮೆ ಮಾಡಿದಾಗ(20K ತಾಪಕ್ಕಿಂತ ಕಡಿಮೆ) ಅವುಗಳಲ್ಲಿ ಇಲೆಕ್ಟ್ರಾನಗಳ ಚಲನೆಗೆ ಶೂನ್ಯ ರೋಧವನ್ನು ತೋರುತ್ತವೆ. ಈ ಪರಿವರ್ತನೀಯ ತಾಪ ಬೇರೆ ಬೇರೆ ಘನವಸ್ತುಗಳಿಗೆ ಬೇರೆಯಾಗಿರುತ್ತದೆ.  ಅತಿ ಪರಮಾಣುಗಳ ಗಾತ್ರ 1 ರಿಂದ 100 ನ್ಯಾನೋ ಮೀಟರ್‌ ಗಳವರೆಗೆ ಇರುತ್ತದೆ. ಅತಿ ಸೂಕ್ಷ್ಮ ವಸ್ತುಗಳು. ಅವುಗಳ ಆಕಾರ, ಗಾತ್ರ ಮತ್ತು ಗುಣಲಕ್ಷಣಗಳ ಆಧಾರದ ಮೇಲೆ ವಿವಿಧ ಗುಂಪುಗಳಾಗಿ ವರ್ಗೀಕರಿಸಬಹುದು. ಅವುಗಳೆಂದರೆ ಫುಲ್ಲರೀನ್‌ ಗಳು ( ಕಾರ್ಬನ್ನಿನ ಬಹುರೂಪತೆ), ಲೋಹದ ಅತಿ ಪರಮಾಣುಗಳು,  ಸಿರಾಮಿಕ ಅತಿ ಪರಮಾಣುಗಳು, ಪಾಲಿಮರಿಕಗ ಅತಿ ಪರಮಾಣುಗಳು ಸೇರಿವೆ.

            ಅತಿ ಪರಮಾಣುಗಳ ಮೇಲ್ಮ್‌ ನ ವಿಸ್ತ್ರೀರ್ಣ ಮತ್ತು ಅವುಗಳ ಗಾತ್ರದಿಂದಾಗಿ ವಿಶಿಷ್ಟ ಭೌತಿಕ ಮತ್ತು ರಾಸಾಯನಿಕ ಗುಣಕ್ಷಣಗಳನ್ನು ಹೊಂದಿವೆ. ಅವುಗಳ ಆಪ್ಟಿಕಲ್‌ ಗುಣಗಳು ಅತಿ ಪರಮಾಣುಗಳ ಗಾತ್ರದ ಮೇಲೆ ಅವಲಂಬಿತವಾಗಿವೆ.  ಗೋಚರ ಬೆಳಕನ್ನು ಹೀರಿಕೊಂಡು ವಿವಿಧ ಬಣ್ಣಗಳನ್ನು ನೀಡುತ್ತವೆ. ಅದೇ ರೀತಿ ಅವುಗಳ ಪ್ರತಿಕ್ರಿಯಾತ್ಮಕ ಗುಣ, ಕಠಿಣತೆ, ಇತರೆ ಗುಣಲಕ್ಷಣಗಳು ಅವುಗಳ ಆಕಾರ, ಗಾತ್ರ ಮತ್ತು ರಚನೆಯ ಮೇಲೆ ಅವಲಂಬಿಸಿವೆ.   ಜೈವಿಕ ವೈದ್ಯಕೀಯ ಮತ್ತು ಔಷಧಿ ಕ್ಷೇತ್ರಗಳಲ್ಲಿ ಅಪಾರ ಅನ್ವಯವನ್ನು ಹೊಂದಿದೆ.

            ಸಿ.ಎನ್. ಆರ್‌ ರಾವ್‌ ರವರು 48 ಕ್ಕಿಂತ ಅಧಿಕ ವೈಜ್ಞಾನಿಕ ಪುಸ್ತಕಗಳನ್ನು ಬರೆದು ವಿಶ್ವವಿಖ್ಯಾತರಾಗದಾರೆ.  ಇದು ಅವರ ಸಾಧನೆಗೆ ಒಂದು ಮೆರಗು ತಂದುಕೊಟ್ಟಿದೆ, ಬರಿ ಸಂಶೋಧನೆ ಮಾತ್ರವಲ್ಲ ವಿಜ್ಞಾನ ಸಾಹಿತ್ಯ ಕ್ಷೇತ್ರದಲ್ಲಿಯೂ ತಮ್ಮ ಜ್ಞಾನದ ಕ್ಷೀತಿಜವನ್ನು ವಿಸ್ತರಿಸಿದ್ದಾರೆ.  ಇವರು ಮಂಡಿಸಿದ 1600 ಕ್ಕೂ ಹೆಚ್ಚಿನ ಸಂಶೋಧನಾ ಲೇಖನಗಳು ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಪತ್ರಿಕೆಗಳಲ್ಲಿ ಪ್ರಕಟವಾಗಿವೆ.

ಪ್ರಶಸ್ತಿಗಳು:  ರಾಸಾಯನ ವಿಜ್ಞಾನ ಕ್ಷೇತ್ರಕ್ಕೆ ಅಪಾರ ಕೊಡುಗೆಯನ್ನು ಗಮನಿಸಿ ಸುಮಾರು 83 ವಿಶ್ವವಿದ್ಯಾಲಯಗಳು ಗೌರವ ಡಾಕ್ಟರೇಟ್‌ ಪದವಿ ನೀಡಿ ಗೌರವಿಸಿವೆ.  ರಾಯಲ್‌ ಸೊಸೈಟ್‌ ಆಫ್‌ ಕೆಮಿಸ್ಟ್ರಿ ಅಕಾಡೆಮಿ ಸದಸ್ಯತ್ವ.  31 ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ವಿಜ್ಞಾನ ಪದಕಗಳು.  ಭಾರತ ಸರ್ಕಾರ 2014ರಲ್ಲಿ ಅತ್ಯುನ್ನತ ನಾಗರಿಕ ಪುರಸ್ಕಾರವಾದ ಭಾರತ ರತ್ನ ನೀಡಿ ಸನ್ಮಾನಿಸಿದೆ.  ಸಿ. ಎನ್.‌ ರಾವರ್‌ ಅವರ ವಿಜ್ಞಾನ ಲೋಕದ ಅನರ್ಘ್ಯ ರತ್ನವಾಗಿದ್ದಾರೆ.  ಪ್ರಪಂಚದ ಮೂಲೆ ಮೂಲೆಗಳಿಂದ ಅವರಿಗೆ ಪ್ರಶಸ್ತಿಗಳು ಹುಡುಕಿಕೊಂಡು ಅವರ ಹಿಂದೆ ಬಂದಿವೆ.  ಇದು ಅವರ ಸಾಧನೆಗೆ ಕೈ ಹಿಡಿದ ಕನ್ನಡಿಯಾಗಿದೆ.

             ಪೋ.ರಾವ್‌ ಅವರು 2016 ರಲ್ಲಿ  ಪ್ರಕಟಿಸಿದ ತಮ್ಮ ಆತ್ಮಚರಿತ್ರೆ “ A life of Science “ ಪುಸ್ತಕದಲ್ಲಿ ಶ್ರೇಷ್ಟ ವಿಜ್ಞಾನಿಯಾಗಬೇಕಾದರೆ ಇರಬೇಕಾದ ಶ್ರದ್ಧೆ, ಬದ್ಧತೆ, ಮಾನಸಿಕ ಮತ್ತು ಶೈಕ್ಷಣಿಕ ತರಬೇತಿ ಬಗ್ಗೆಯೂ ವಿವರಣೆ ನೀಡಿದ್ದಾರೆ.  ಅವರೆ ಹೇಳುವಂತೆ, “ ಶ್ರೇಷ್ಟ ವಿಜ್ಞಾನಿಗಳ ಬಗ್ಗೆ ಕೇಳುವುದರಿಂದ ಹಾಗೂ ಓದುವುದರಿಂದ ಯುವ ಜನಾಂಗಕ್ಕೆ ವಿಜ್ಞಾನ ಕ್ಷೇತ್ರದಲ್ಲಿ ಮುನ್ನಡೆಯಲು ಪ್ರೇರಣೆ ದೊರಕುತ್ತದೆ.

 

 

 

 

 

Comments

Popular posts from this blog

ಸಾಮಾನ್ಯ ಜ್ಞಾನ