ಕವನಗಳು 1. ನಡೆ ಇರಲಿ ನುಡಿದಂತೆ ನೋಟ ಇರಲಿ ದೃಷ್ಟಿಯಂತೆ ಪ್ರೀತಿ ಇರಲಿ ನಿಷ್ಕಲ್ಮಶದಂತೆ. ಜೆ.ಬಿ.ಕೆ. 2. ಸತ್ಯ ಹೇಳುವುದಿಲ್ಲ ನಿತ್ಯ ನಿತ್ಯ ನಡೆಯುವುದಿಲ್ಲ ಮಿಥ್ಯ ಸತ್ಯಮೇವವೆ ಪಥ್ಯ. ಜೆ.ಬಿ.ಕೆ. 3. ಪುಸ್ತಕದ ಜ್ಞಾನ ತುಂಬಿದೆ ಮಸ್ತಕದಿ ಅಹಂ ಅಜ್ಞಾನದ ಗೂಡಾಯಿತು. ಮಾಹಿತಿ ತುಂಬಿದ ಜ್ಞಾನದ ಜಗದಲ್ಲಿ ಮಾನವೀಯ ಮೌಲ್ಯಗಳ ಮರೀಚಿಕೆಯಾಯಿತು. ಜೆ.ಬಿ.ಕೆ. 4. ಮಾಹಾನ ಸಾಧಕರು ಮೌನಿಯಾದರು ಸಾಧಿಸದ ಸಾಧಕರು ಮಹನೀಯರಾದರು. ಸೃಷ್ಟಿ ನಿಶಬ್ದ, ಲಯ ಶಬ್ದ. ...
Posts
- Get link
- X
- Other Apps
ಕರ್ನಾಟಕದ ವಿಜ್ಞಾನಿಗಳ ಚಿಂತಾಮಣಿ ನಾಗೇಶ ರಾಮಚಂದ್ರರಾವ್ C N R RAO ಸಿ.ಎನ್ಆರ್. ರಾವ ವಿಶ್ವ ವಿಖ್ಯಾತ ವಿಜ್ಞಾನಿಗಳಲೊಬ್ಬರು. ಹನುಮಂತ ನಾಗೇಶರಾವ್ ಮತ್ತು ನಾಗಮ್ಮ ದಂಪತಿಗಳ ಮಗನಾದ ಪೊ. ಚಿಂತಾಮಣಿ ನಾಗೇಶರಾಮಚಂದ್ರರಾವ್ ಅವರು 1934, ಜೂನ್ 30 ರಂದು ಬೆಂಗಳೂರಿನಲ್ಲಿ ಜನಿಸಿದರು. ಶಿಕ್ಷಣ: ಆರು ವರ್ಷದವರಾಗಿದ್ದಾಗಲೆ ಮಾಧ್ಯಮಿಕ ಶಾಲೆಗೆ ಹೋಗಲರಾಂಭಿಸಿದರು. ತರಗತಿಯಲ್ಲಿಯೆ ಅವರು ಚಿಕ್ಕವರಾಗಿದ್ದರೂ, ಸಹಪಾಠಿಗಳು ಹಿರಿಯರಾಗಿದ್ದರೂ ಇದು ಅವರ ಮೇಲೆ ಯಾವುದೇ ಪ್ರಭಾವ ಬೀರಲಿಲ್ಲ. ಬೆಳೆಯುವ ಸಿರಿ ಮೊಳಕೆಯಲ್ಲಿ ಎಂಬಂತೆ ಅವರ ಪ್ರತಿಭೆಯು ತಮ್ಮ ವಯಸ್ಸಿಗೂ ಮೀರಿ ಗುರುತಿಸಿಕೊಂಡಿದ್ದರು. ವಿಜ್ಞಾನ ವಿಷಯದ ಬಗ್ಗೆ ಇರುವ ಆಕರ್ಷಣೆ ಕೂಡಾ ಕಾರಣವಾಗಿತ್ತು. ಮೈಸೂರು ರಾಜ್ಯದ ಲೋವರ್ ಸೆಕೆಂಡರಿ ಪರೀಕ್ಷೆಯಲ್ಲಿ (ಇಂದಿನ 7 ನೆಯ ತರಗತಿಗೆ ಸಮಾನದದ್ದು) 1944 ರಲ್ಲಿ ಪ್ರಥಮ ಶ್ರೇಣಿಯಲ್ಲಿ ತೇರ್ಗಡೆಯಾದರು. ಪ್ರೌಢಶಾಲಾ ಶಿಕ್ಷಣವನ್ನು ಕನ್ನಡ ಮಾಧ್ಯಮದಲ್ಲಿಯೇ ಕಲಿತರು. ಪ್ರೌಢ ಶಾಲೆಯಲ್ಲಿ ಶ್ರೇಷ್ಠ ಶಿಕ್ಷಕರಿದ್ದರು. ರಸಾಯನಶಾಸ್ತ್ರದ ಶಿಕ್ಷಕರಾದ ಮಾನ್ಯ ಶಿವರುದ್ರಪ್ಪ, ಪಿ.ಎಸ್. ನಾರಾಯಣರಾವ್, ಮ...
- Get link
- X
- Other Apps
ಕರ್ನಾಟಕದ ವಿಜ್ಞಾನಿ ಬಿ.ಜಿ. ಎಲ್ ಸ್ವಾಮಿ ಕರ್ನಾಟಕವು ರಸ-ಋಷಿಗಳ, ವಿಜ್ಞಾನಿಗಳ ಬೀಡು. ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ಕಗ್ಗದ ಮೂಲಕ ಮನೆಮಾತಾಗಿರುವ ಡಾ. ಡಿ.ವಿ.ಜಿಯವರ ಪುತ್ರರೇ ಶ್ರೀ ಬಿ.ಜಿ.ಎಲ್.ಸ್ವಾಮಿ. ಪೂರ್ಣ ಹೆಸರು ಬೆಂಗಳೂರು ಗುಂಡಪ್ಪ ಲಕ್ಷ್ಮೀನಾರಾಯಣ ಸ್ವಾಮಿ. ಅವರದ್ದು ಬಹುಮುಖ ಪ್ರತಿಭೆ. ಸಸ್ಯ ವಿಜ್ಞಾನಿ, ಜನಪ್ರಿಯ ವಿಜ್ಞಾನ ಲೇಖಕರು. ಸಂಗೀತ, ಚಿತ್ರಕಲೆಗಳಲ್ಲಿ ಆಸಕ್ತಿಯನ್ನು ಹೊಂದಿದ್ದರು, ಸ್ವತಃ ಚಿತ್ರಗಳನ್ನು ಬರೆಯುತ್ತಿದ್ದರು. ಇವರ ಜನನ ಫೆಬ್ರುವರಿ 5, 1918ನೆ ಇಸ್ವಿ ತಂದೆ ಡಿವಿಜಿ, ತಾಯಿ ಭಾಗೀರತಿಯವರ ಸುಪುತ್ರ. ಅವರ ಐದನೆಯ ವಯಸ್ಸಿನಲ್ಲಿ ತಾಯಿ ಬೆಂಕಿ ಅವಘಡದಲ್ಲಿ ಇಹಲೋಕ ತ್ಯಜಿಸಿದರು. ಡಿ.ವಿ.ಜಿಯವರಂಥ ಹಿರಿಯ ಚೇತನದ ಸುಪುತ್ರರಾಗಿ ಬೆಳೆದ ಸ್ವಾಮಿಯವರು ಹೆಚ್ಚಾಗಿ ತಂದೆಯವರ ಸಾಹಿತ್ಯದಿಂದ ಪ್ರಭಾವಿತರಾದ ವ್ಯಕ್ತಿ. ಬೆಂಗಳೂರಿನ ಖ್ಯಾತ ನ್ಯಾಷನಲ್ ಹೈಸ್ಕೂಲಿನಲ್ಲಿ 1936 ರಲ್ಲಿ ಪ್ರೌಢ ಶಾಲಾ ವಿದ್ಯಾಭ್ಯಾಸದ ನಂತರ ಸೆಂಟ್ರಲ್ ಕಾಲೇಜನಲ್ಲಿ ಇಂಟರ್ ಮಿಡಿಯಟ್ ಮುಗಿಸಿದರು. 1939ರಲ್ಲಿ ಬೆಂಗಳೂರಿನ ಸೆಂಟ್ರಲ್ ಕಾಲೇಜನಿಂದ ಸಸ್ಯ ಶಾಸ್ತ್ರದಲ್ಲಿ B..Sc ಆನರ್ಸ ಪದವಿಯನ್ನು ಪ...
- Get link
- X
- Other Apps
ಆಧುನಿಕ ಭಾರತೀಯ ವೈಜ್ಞಾನಿಕ ಪರಂಪರೆ ಭಾರತವು ಜ್ಞಾನಿಗಳ, ವಿಜ್ಞಾನಿಗಳ ತವರೂರಾಗಿದೆ. ವಿಜ್ಞಾನವು ಸತ್ಯಗಳ ಅಧ್ಯಯನ ಮತ್ತು ನಾವು ಪ್ರಪಂಚದೊಂದಿಗೆ ಸಂವಹನ ನಡೆಸುವ ವಿಧಾನವಾಗಿದೆ . ಇಡೀ ವಿಶ್ವಕ್ಕೆ ಶೂನ್ಯವನ್ನು ಪರಿಚಯಿಸಿದ ಕೀರ್ತಿ ಭಾರತಕ್ಕೆ ಸಲ್ಲುತ್ತದೆ. ಭಾರತದ ವಿಜ್ಞಾನದ ತಳಹದಿಯು ಆಯರ್ಭಟರು, ವರಾಹಮೀರ, ಶುಶ್ರುತ, ಪರಾಷರು, ಕಣಾದ, ಚರಕ ಇಂತಹ ಮಾಹನ ವಿಜ್ಞಾನಿಗಳಿಂದ ನಿರ್ಮಿಸಲ್ಪಟ್ಟಿದೆ. ವಿಜ್ಞಾನವು ಪ್ರಜ್ಞೆಯಾಗುವುದರೊಂದಿಗೆ , ಸಾಮಾನ್ಯ ಮನೋಧರ್ಮ ವಾಗಬೇಕು. ವಿಜ್ಞಾನವು ಸಮಾಜಮುಖಿಯಾಗಿರಬೇಕು. 1914 ರಲ್ಲಿ ಸ್ಥಾಪಿತವಾದ ಭಾರತೀಯ ವಿಜ್ಞಾನ ಕಾಂಗ್ರೆಸ ಸ್ವಾತಂತ್ರ್ಯ ಪೂವರ್ದಲ್ಲಿ ಭಾರತದಲ್ಲಿ ವಿಜ್ಞಾನಕ್ಕೆ ಒಂದು ನಿಶ್ಚಿತ ರೂಪ ಕೊಡುವಲ್ಲಿ ಮಹತ್ವದ ಪಾತ್ರ ವಹಿಸಿದೆ. ಐಸಾಕ್ ನ್ಯೂಟನ್ನನವರ ಮಾತಿನಲ್ಲಿ ಹೇಳುವುದಾದರೆ ́́ ಹಿಂದಿನವರ ಹೆಗಲ ಮೇಲೆ ಕುಳಿತೇ ನಾನು ಮುಂದಿನ ನೋಟವನ್ನು ಪಡೆದಿದೆ ʼ . ...
ಕೀಟಾಹಾರಿ ಸಸ್ಯಗಳು
- Get link
- X
- Other Apps
ಕೀಟಾಹಾರಿ ಸಸ್ಯಗಳು ಕೆಲವು ಸಸ್ಯಗಳು ಕೀಟಗಳನ್ನು ಭಕ್ಷಿಸಿ, ಅವುಗಳಿಂದ ತಮಗೆ ಬೇಕಾಗಿರುವ ಪೋಷಕಾಂಶಗಳನ್ನು ಪಡೆದು ಕೊಂಡು ಬೆಳೆಯುತ್ತವೆ. ಅಂತಹ ಸಸ್ಯಗಳಿಗೆ ಕೀಟಾಹಾರಿ ಸಸ್ಯಗಳು ಎನ್ನುವರು.ಉದಾ: ನೋಣದ ಬೋನು, ಹೂಜಿ ಗಿಡ ಇತ್ಯಾದಿಗಳು. ಈ ಸಸ್ಯಗಳು ಸಾರಜನಕ ಕೊರತೆ ಇರುವ ಪ್ರದೇಶಗಳಲ್ಲಿ ಬೆಳೆಯುತ್ತವೆ. ಈ ಸಾರಜನಕದ ಕೊರತೆಯನ್ನು ನಿವಾರಿಸಿಕೊಳ್ಳಲು, ಕೀಟಗಳನ್ನು ಭಕ್ಷಿಸುತ್ತವೆ. ಈ ಸಸ್ಯಗಳ ಎಲೆಗಳು ಮಾರ್ಪಾಡು ಆಗಿ ನೋಣದ ಬೋನಿನಾಕಾರ ಅಥವಾ ಹೂಜಿ ಯಾಕಾರಕ್ಕೆ ಬದಲಾವಣೆ ಹೊಂದುತ್ತವೆ. ಇವುಗಳಲ್ಲಿ ಲೋಳೆಯಂತಹ ಪದಾರ್ಥಗಳನ್ನು ಸ್ರವಿಸುತ್ತವೆ. ಕೀಟಗಳು ಇಂತಹ ಸಸ್ಯಗಳ ಮೇಲೆ ಕುಳಿತಾಗ ಲೋಳೆಯಂತಹ ಪದಾರ್ಥಗಳಲ್ಲಿ ಸಿಲುಕಿಕೊಳ್ಳುತ್ತವೆ, ಕೊನೆಗೆ ಸತ್ತು ಹೋಗುತ್ತವೆ. ಲೋಳೆಯಂತಹ ವಸ್ತು ಜಿರ್ಣಕಾರಿ ಕಿಣ್ವಗಳನ್ನು ಹೊಂದಿದ್ದಉ ಕೀಟಗಳನ್ನು ವಿಘಟಿಸಿ ಅವುಗಳಿಂದ ಸಾರಜನಕವನ್ನು ಪಡೆದುಕೊಳ್ಳುತ್ತವೆ. ಭಾರತದಲ್ಲಿ ಕೀಟಾಹಾರಿ ಸಸ್ಯಗಳು ಹಿಮಾಲಯ ಪರ್ವತ ಶ್ರೇಣೀ, ಅಸ್ಸಾಮ್, ಕರ್ನಾಟಕಗಳಲ್ಲಿ ಕಂಡುಬರುತ್ತವೆ. ಕೀಟಾಹಾರಿ ಸಸ್ಯಗಳು ಸ್ರವಿಸುವ ಸ್ರವಿಕೆಯಲ್ಲಿ ಜೀವರಾಸಾಯನಿಕ ವಸ್ತುಗಳು ಮತ್ತು ಜೀರ್ಣ ಕಾರಿ ಕಿಣ್ವಗಳನ್ನು ಹೊಂದಿರುತ್ತವೆ....
ಸಾಮಾನ್ಯ ಜ್ಞಾನ
- Get link
- X
- Other Apps
1 ) ಊಟ ಮಾಡಿದ ನಂತರ ನಿದ್ರೆ ಬರಲು ಕಾರಣವೇನು? ಆಹಾರವು ಸಾಮಾನ್ಯವಾಗಿ ಕಾರ್ಬೋಹೈಡ್ರೇಟ್ ಗಳ ಸಮೃದ್ಧ ಆಕರಗಾಳಗಿವೆ.ಇವುಗಳ ಸೇವನೆ ನಂತರ ಜೀರ್ಣ ಪ್ರಕ್ರಿಯೆಯಲ್ಲಿ ಗ್ಲೋಕೋಸ್ ಆಗಿ ಪರಿವರ್ತನೆಯಾಗುತ್ತದೆ. ಇನ್ಸುಲಿನ ಪ್ರಮಾಣ ಹೆಚ್ಚಾಗುತ್ತದೆ.ಟ್ರಿಪ್ತೊಫನ್ ಕೊಬ್ಬಿನ ಆಮ್ಲ ಪ್ರವೇಶಿಸಲು ಪ್ರೇರೇಪಿಸುತ್ತದೆ. ಇದು ಮೆಲಟೋನಿನ್ ಮತ್ತು ಸಿರೋಟೋನಿನ್ ಹಾರ್ಮೋನ್ ಗಳನ್ನು ಹೆಚ್ಚಿಸಲು ಕಾರಣವಾಗುತ್ತದೆ. ನಿದ್ರೆ ಸಂಭಂದಿಸಿದ ಹಾರ್ಮೋನಗಳಾಗಿವೆ. 2) ಪೇರಳೆ ಹಣ್ಣಿನ (ಜಾಪುಳಕಾಯಿ)ಪ್ರಯೋಜನಗಳು: ಈ ಹಣ್ಣಿನಲ್ಲಿ ಜೀವಸತ್ವ "ಸಿ", ಲೈಕೋಪಿನ್ ಹಾಗೂ ಆಂಟಿ ಆಕ್ಸಿಡೆಂಟಗಳು ಹೇರಳವಾಗಿ ಕಂಡುಬರುತ್ತವೆ. ಅ) ಮಧುಮೇಹಕ್ಕೆ ಸಹಾಯಕ:ಮಧುಮೇಹ ರೋಗಿಗಳಿಗೆ ಪೇರಳೆ ಹಣ್ಣು ಬಹಳ ಪ್ರಯೋಜನಕಾರಿಯಾಗಿದೆ.ಪೇರಳೆ ಹಣ್ಣು ನಿಯಮಿತವಾಗಿ ಸೇವಿಸುವುದರಿಂದ ಅದರಲ್ಲಿರುವ ಗ್ಲೈಸೆಮಿಗೆ ಇಂಡೆಕ್ಸ ಕಾರಣದಿಂದಾಗಿ ಮಧುಮೇಹ ನಿಯಂತ್ರಿಸಬಹುದು. ಆ)ಮಲಬದ್ಧತೆ ನಿವಾರಣೆ:ಪೇರಳೆ ಹಣ್ಣಿನ ಬೀಜಗಳು ಜೀರ್ಣಕ್ರಿಯೆಯ ಸಮ್ ಸ್ಯೆಗಳನ್ನು ತೆಗೆದುಹಾಕಲು ಸಹಾಯ ಮಾಡುತ್ತದೆ. ಜೀರ್ಣಕ್ರಿಯೆ ಸರಿಯಾಗಿ ಮಲಬದ್ಧತೆ ಸಮಸ್ಯೆ ಕೂಡ ಇರುವುದಿಲ್ಲ. ಇ)ರೋಗನಿರೋಧಕ ಶಕ್ತಿ ಹೆಚ್ಚಿಸುತ್ತದೆ: ಪೇರಳೆ ಹಣ್ಣಿನಲ್ಲಿ ಜೀವಸತ್ವ ʼಸಿʼ ಇರುವುದರಿಂದ ದೇಹದ ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತದೆ. ಈ) ಕಣ್ಣಿನ ದೃಷ್ಟಿಗೆ...