ಕವನಗಳು
1. ನಡೆ ಇರಲಿ ನುಡಿದಂತೆ
ನೋಟ ಇರಲಿ ದೃಷ್ಟಿಯಂತೆ
ಪ್ರೀತಿ ಇರಲಿ ನಿಷ್ಕಲ್ಮಶದಂತೆ.
ಜೆ.ಬಿ.ಕೆ.
2. ಸತ್ಯ ಹೇಳುವುದಿಲ್ಲ ನಿತ್ಯ
ನಿತ್ಯ ನಡೆಯುವುದಿಲ್ಲ ಮಿಥ್ಯ
ಸತ್ಯಮೇವವೆ ಪಥ್ಯ.
ಜೆ.ಬಿ.ಕೆ.
3. ಪುಸ್ತಕದ ಜ್ಞಾನ ತುಂಬಿದೆ ಮಸ್ತಕದಿ
ಅಹಂ ಅಜ್ಞಾನದ ಗೂಡಾಯಿತು.
ಮಾಹಿತಿ ತುಂಬಿದ ಜ್ಞಾನದ ಜಗದಲ್ಲಿ
ಮಾನವೀಯ ಮೌಲ್ಯಗಳ ಮರೀಚಿಕೆಯಾಯಿತು.
ಜೆ.ಬಿ.ಕೆ.
4. ಮಾಹಾನ ಸಾಧಕರು ಮೌನಿಯಾದರು
ಸಾಧಿಸದ ಸಾಧಕರು ಮಹನೀಯರಾದರು.
ಸೃಷ್ಟಿ ನಿಶಬ್ದ, ಲಯ ಶಬ್ದ.
ಜೆ.ಬಿ.ಕೆ
5. ಮನಸ್ಸು ಬುದ್ಧಿಯ ನಡುವೆ ಬಡವಾಗಿ
ಬಾಡುತಿವೆ ಯೋಚನೆಗಳು ವೇಗವಾಗಿ
ನಿಂತಿದೆ ಜೀವ, ಭವಿಷ್ಯದ ಭರವಸೆಯಾಗಿ.
ಜೆ.ಬಿ.ಕೆ.
6. ಏನು ತೋಚದ ಸ್ಥಿತಿ ನನ್ನದಾಗಿದೆ
ವಿಧಿ ಬರಹವೋ, ವಿಧಿ ಯಾಟವೋ
ಸುಮ್ಮನೆ ಶೂನ್ಯತೆಯಿಂದ ಸಾಗಿದ ಜೀವವಾಗಿದೆ.
ಜೆ.ಬಿ.ಕೆ
7. ಸತ್ಯ, ಪ್ರಮಾಣಿಕರಿಗಿಲ್ಲ ಈಗ ಬೆಲೆ
ತೋರಿಕೆ, ಹೇಳಿಕೆಗೆ ಈಗ ಬೆಲೆ
ಪರದೆ ಸರಿದಾಗ ಮಾತ್ರ ನಿಜ ಬೆಲೆ.
ಜೆ.ಬಿ.ಕೆ
Comments
Post a Comment