Collected knowledge
ವಾಯುಗೋಳದ ಸ್ತರಗೋಳದಲ್ಲಿ ಓಝೋನ್ ಕಂಡು ಬರುತ್ತದೆ. ಇದನ್ನು ಜರ್ಮನ್ ಸಂಜಾತ ಸ್ವಿಸ್ ವಿಜ್ಞಾನಿ "ಕ್ರಿಶ್ಚಿಯನ್ ಫೆೆಡರಿಿಕ ಶೋನ್ " ಓಝೋನ್ ಪದರನ್ನು ೧೮೪೦ರಲ್ಲಿ ಪತ್ತೆ ಹಚ್ಚಿ ದರು. ೭೦ರ ದಶಕದಲ್ಲಿ ಓಝೋನ್ ನಾಶದ ಪ್ರಮಾಣ ಅಧಿಕವಾಗಿತ್ತು. ಓಝೋನ್ ನಾಶಕ್ಕೆ ಕಾರಣವಾಗಿರುವ ರಾಸಾಯನಿಕ CFC ಕ್ಲೋರೋಫ್ಲೋರೋ ಕಾರ್ಬನ್. ಒಂದು ಕ್ಲೋರಿನ್ ಅಣು ಒಂದು ಲಕ್ಷ ಓಝೋನ್ ಅಣುಗಳನ್ನು ನಾಶಮಾಡುತ್ತದೆ. ಸ್ವಿಸ್ ರಸಾಯನ ವಿಜ್ಞಾನಿ ಜಾಕ್ವೆಸ್ ಲೂಯಿಸ್ ಸೋರೆಟ ೧೮೬೫ ರಲ್ಲಿ ಓಝೋನ್ ಅಣು ಮೂರು ಆಕ್ಸಿಜನ್ ಪರಮಾಣುಗಳಿಂದ ಮಾಡಲ್ಪಟ್ಟಿದೆ. ಓಝೋನ್ ಆಕ್ಸಿಜನ್ ನ ಬಹುರೂಪತೆಯಾಗಿದೆ.
ಓಜೋನ್ ಬಣ್ಣ ತಿಳಿ ನೀಲಿ. ನೀರಿನಲ್ಲಿ ಸ್ವಲ್ಪ ವಿಲೀನವಾಗುತ್ತದೆ.ಕಾರ್ಬನ್ ಟೆಟ್ರಾಕ್ಲೋರೈಡನಲ್ಲಿ ಮತ್ತು ಪ್ಲೋರೊಕಾರ್ಬನ್ ನಲ್ಲಿ ಸಂಪೂರ್ಣ ವಿಲೀನವಾಗುತ್ತದೆ.
ಪ್ರತಿ ವರ್ಷ ಸೆಪ್ಟಂಬರ್ 16 ನ್ನು ವಿಶ್ವ ಓಜೋನ್ ದಿನವಾಗಿ ಆಚರಿಸಲಾಗುತ್ತದೆ. ಜೀವಿಗಳು ವಾಸಿಸಲು ಯೋಗ್ಯವಾಗಿರುವ ಏಕೈಕ್ ಗ್ರಹ ಭೂಮಿ, ಈ ಭೂಮಿಯ ರಕ್ಷಾಕವಚವಾಗಿರುವ ಓಜೋನ್ ಪದರಿನ ರಕ್ಷಣೆ ಕುರಿತು ಜನ ಸಾಮಾನ್ಯರಲ್ಲಿ ಜಾಗೃತಿ ಮೂಡಿಸುವುದು.ಇಲ್ಲದಿದ್ದರೆ ಮನುಕುಲಕ್ಕೆ ಆಪತ್ತು.
ಓಜೋನ್ ಪದರು ನಿಧಾನವಾಗಿ ಸ್ತರಗೋಳದಲ್ಲಿ ರಚನೆಯಾಗುತ್ತದೆ.ಸೂರ್ಯನಿಂದ ಬರುವ ಹಾನಿಕಾರಕ ನೇರಳಾತೀತ ಕಿರಣಗಳಿಂದ ಭೂಮಿಯನ್ನು ರಕ್ಷಿಸುತ್ತದೆ.
ಸೂರ್ಯನಿಂದ ಬರುವ ಕಿರಣಗಳಿಂದ ಆಕ್ಸಿಜನ್ ಅಣು (O2) ವಿಭಜನೆಗೊಂಡು, ಆಕ್ಸಿಜನ್ ನ ಎರಡು ಪರಮಾಣುಗಾಳುಗುತ್ತವೆ. ನಂತರ ಈ ಪರಮಾಣುಗಳು ಸಂಯೋಜನೆ ಹೊಂದಿ ಓಜೋನ್ ಅಣುವಾಗಿ ರೂಪಗೊಳ್ಳುತ್ತದೆ.ಈ ಪ್ರಕ್ರಿಯೆಯು ವಾತಾವರಣದ ಸ್ತರಗೋಳದಲ್ಲಿ ನಡೆಯುತ್ತದೆ. ಆದರೆ ಮಾನವನ ಚಟುವಟಿಕೆಗಳಿಂದ ಉತ್ಪತ್ತಿಯಾಗುವ ರಾಸಾಯನಿಕಗಳೊಡನೆ ಕೂಡಾ ವರ್ತಿಸುತ್ತದೆ. ಅವುಗಳಲ್ಲಿ ಪ್ರಮುಖವಾಗಿ ಕ್ಲೋರೀನ್ ಹಾಗೂ ಬ್ರೋಮೀನ್ ರಾಸಾಯನಿಕಗಳು.
ಭೂಮಿಗೆ ರಕ್ಷಾಕವಚ:
ಓಜೋನ್ ಪದರು ಸೂರ್ಯನಿಂದ ಬರುವ ಹಾನಿಕಾರಕ ನೇರಳಾತೀತ ವಿಕಿರಣಗಳನ್ನು ತಡೆಯುತ್ತದೆ. ಒಂದು ವೇಳೆ ಈ ಪದರು ಇಲ್ಲದಿದ್ದರೆ ಹಾನಿಕಾರಕ ವಿಕಿರಣಗಳು ಸಸ್ಯಗಳನ್ನು ತಲುಪಿ ದ್ಯುತಿ ಸಂಶ್ಲೇಷಣೆ ಕ್ರಿಯೆಗೆ ತೊಡಕನ್ನುಂಟುಮಾಡುತ್ತವೆ. ಸಮುದ್ರದಲ್ಲಿರುವ ಶೈವಲಗಳು ನಾಶವಾಗುತ್ತವೆ. ಮಾನವನಿಗೆ ಚರ್ಮದ ಕ್ಯಾನ್ಸರ ಉಂಟಾಗಬಹುದು. ವಂಶವಾಹಿಗಳಲ್ಲಿ ಏರುಪೇರುಗಳಾಗುತ್ತವೆ.
ಓಜೋನ್ ಪದರು ನಾಶವಾಗಲು ಕಾರಣಗಳು:
- ಏರ್ ಕಂಡಿಷನಗಳಲ್ಲಿ ಹಾಗೂ ರೆಫ್ರಿಜೀರೆಟರಗಳಲ್ಲಿ ಬಳಸುವ ಕ್ಲೋರೋಫ್ಲೋರೋ ಕಾರ್ಬನಗಳು.
- ಹ್ಯಾಲೋಜನ್ ಗಳು
- ಕಾರ್ಬನ್ ಟೆಟ್ರಾಕ್ಲೋರೈಡ್ ಗಳು.
- ಮಿಥೈಲ್ ಕ್ಲೋರೊಫಾರ್ಮಗಳು.
- ಮಾನವನ ಅಂತರಿಕ್ಷ ಯಾತ್ರಗಳು, ರಾಕೆಟ ಉಡಾವಣೆಗಳು.
- ಪರಿಸರ ಸ್ನೇಹಿ ಜೀವನ ಸಾಗಿಸುವುದು.
- ಪರಿಸರ ಸಂರಕ್ಷಣೆ
- ಕ್ಲೋರೋಫ್ಲೋರೋ ಕಾರ್ಬನ ಬಳಕೆ ನಿಷೇಧಿಸುವುದು.
- ರಾಕೆಟ್ ಉಡಾವಣೆ ಕಡಿಮೆ ಮಾಡುವುದು.
- ನೈಸರ್ಗಿಕ ಸಂಪನ್ಮೂಲಗಳ ಹಿತಮಿತ ಬಳಕೆ.
Comments
Post a Comment