ಡಿ.ಎನ್.ಎ
ಡಿ.ಎನ್.ಎ.
ಪ್ರಕೃತಿಯು ಸಜೀವ ಕಾರ್ಖಾನೆ. ಇದರ ಮಡಿಲ್ಲಲ್ಲಿ ಅಸಂಖ್ಯಾತ ಜೀವಿಗಳು ತಮ್ಮ ಜೀವನಚಕ್ರದಲ್ಲಿ ಮುಂದುವರೆಯುತ್ತಲ್ಲಿವೆ. ಜೀವಿಗಳ ಚಿದಂಬರ ರಹಸ್ಯ ಡಿ.ಎನ್.ಎ ಎಂಬ ಅನುವಂಶೀಯ ವಸ್ತುವಿನಲ್ಲಿ ಅಡಗಿದೆ.ಎಲ್ಲಾ ಜೀವಿಗಳ ಜೀವಕೋಶದ ಕೋಶ ಕೇಂದ್ರದಲ್ಲಿ ಕಂಡು ಬರುತ್ತದೆ.
ಡಿ.ಎನ್.ಎ ಒಂದು ಬೃಹತ್ ಅಣು. ಇದು ನಿರ್ಜೀವ ಮತ್ತು ಜೀವ ಜಗತ್ತಿನ ಮಧ್ಯದ ಬಂಧ. ಇದೊಂದು ಮಹಾಮಾಂತ್ರಿಕ.
1.ಅಡಿನೈನ್
2.ಗ್ವಾನಿನ್
3.ಸೈಟೋಸಿನ್
4.ಥೈಮೀನ್ ಎಂಬ ನಾಲ್ಕು ಸಾರಜನಕ ಪ್ರತ್ಯಾಮ್ಲಗಳು ಡಿ.ಎನ್.ಎ ಯಲ್ಲಿ ಕಂಡುಬರುತ್ತವೆ. ಅ.ಗ್ವ.ಸೈ.ಥೈ ಈ ನಾಲ್ಕು ಅಕ್ಷರಗಳ ವೈವಿಧ್ಯಮಯ ಜೋಡಣೆ ವೈವಿಧ್ಯಮಯ ಜೀವಿಗಳ ಗುಣಧರ್ಮಗಳ ಗುಟ್ಟು.ಈ ನಾಲ್ಕ ಅಕ್ಷರಗಳ ಗುಪ್ತ ಭಾಷೆ ಜೀವಕೋಶಗಳ ಭಾಷೆ.ಈ ನಾಲ್ಕ ಅಕ್ಷರಗಳ ಭಾಷೆ ಮೂರಕ್ಷರದ ಶಬ್ದಗಳಾಗಿ, ಡಿ.ಎನ್.ಎ ಯ ಸಂದೇಶಗಳಾಗುತ್ತವೆ.ಈ ಸಂದೇಶಗಳನ್ನು ಓದುವ ಕೆಲಸ ಆರ್. ಎನ್. ಎ ಎಂಬ ಅಣು ಮಾಡುತ್ತದೆ. ಡಿ.ಎನ್.ಎ ಸಂದೇಶವನ್ನು ಅದು ತನ್ನ ಅಕ್ಷರ ಶಬ್ದಗಳಿಂದ ಕಾಪಿ ಮಾಡಿಕೊಳ್ಳತ್ತದೆ. ಹೀಗೆ ಡಿಎನ್ಎ ಸಂದೇಶವನ್ನು ಅರ್ಥೈಸಿಕೊಂಡು ಆರ್.ಎನ್.ಎ ಕೋಶಕೇಂದ್ರ ಬಿಟ್ಟು ಕೋಶದ್ರವ್ಯಕ್ಕೆ ಬರುತ್ತದೆ.ಆರ.ಎನ್.ಎ ಸಂದೇಶದಂತೆ ಅಂಮೈನೋ ಆಮ್ಲಗಳು ರೈಬೋಸೋಮಗಳಲ್ಲಿ ವ್ಯವಸ್ಥಗೊಂಡು ಜೋಡಣೆ ಗೊಂಡು ಪ್ರೋಟೀನ ಸಂಶ್ಲೇಷಣೆ ಕ್ರಿಯೆ ಜರಗುತ್ತದೆ.
ಈ ಪ್ರೋಟೀನಗಳು ಕಿಣ್ವಗಳಾಗಿ, ರಾಸಾಯನಿಕ ಕ್ರಿಯಗಳನ್ನು ನಿಯಂತ್ರಿಸಿ ಜೀವಿಗಳ ಗುಣಧರ್ಮಗಳನ್ನು ನಿರ್ಧಾರ ಮಾಡುತ್ತವೆ.ಒಂದು ವೇಳೆ ಡಿಎನ್ ಎ ಸಂದೇಶದಲ್ಲಿ ಯಾವುದೇ ಅಕ್ಷರ ಬಿಟ್ಟು ಹೋದರೆ ಜೀವಿಯ ಗುಣಧರ್ಮದಲ್ಲಿ ವ್ಯತ್ಯಾಸ ಉಂಟಾಗುತ್ತದೆ. ಇದನ್ನೇ ಉತ್ಪರಿವರ್ತನೆ ಅಥವಾ ಮ್ಯೂಟೇ಼ಷನ ಎನ್ನುವರು.
Comments
Post a Comment