ಕೀಟಾಹಾರಿ ಸಸ್ಯಗಳು

 ಕೀಟಾಹಾರಿ ಸಸ್ಯಗಳು

        ಕೆಲವು ಸಸ್ಯಗಳು ಕೀಟಗಳನ್ನು ಭಕ್ಷಿಸಿ, ಅವುಗಳಿಂದ ತಮಗೆ ಬೇಕಾಗಿರುವ ಪೋಷಕಾಂಶಗಳನ್ನು ಪಡೆದು ಕೊಂಡು ಬೆಳೆಯುತ್ತವೆ. ಅಂತಹ ಸಸ್ಯಗಳಿಗೆ ಕೀಟಾಹಾರಿ ಸಸ್ಯಗಳು ಎನ್ನುವರು.ಉದಾ: ನೋಣದ ಬೋನು, ಹೂಜಿ ಗಿಡ ಇತ್ಯಾದಿಗಳು.

      ಈ ಸಸ್ಯಗಳು ಸಾರಜನಕ ಕೊರತೆ ಇರುವ ಪ್ರದೇಶಗಳಲ್ಲಿ ಬೆಳೆಯುತ್ತವೆ.  ಈ ಸಾರಜನಕದ ಕೊರತೆಯನ್ನು ನಿವಾರಿಸಿಕೊಳ್ಳಲು, ಕೀಟಗಳನ್ನು ಭಕ್ಷಿಸುತ್ತವೆ.  ಈ ಸಸ್ಯಗಳ ಎಲೆಗಳು ಮಾರ್ಪಾಡು ಆಗಿ ನೋಣದ ಬೋನಿನಾಕಾರ ಅಥವಾ ಹೂಜಿ ಯಾಕಾರಕ್ಕೆ ಬದಲಾವಣೆ ಹೊಂದುತ್ತವೆ. ಇವುಗಳಲ್ಲಿ ಲೋಳೆಯಂತಹ ಪದಾರ್ಥಗಳನ್ನು ಸ್ರವಿಸುತ್ತವೆ.   ಕೀಟಗಳು ಇಂತಹ ಸಸ್ಯಗಳ ಮೇಲೆ ಕುಳಿತಾಗ ಲೋಳೆಯಂತಹ ಪದಾರ್ಥಗಳಲ್ಲಿ ಸಿಲುಕಿಕೊಳ್ಳುತ್ತವೆ, ಕೊನೆಗೆ ಸತ್ತು ಹೋಗುತ್ತವೆ. ಲೋಳೆಯಂತಹ ವಸ್ತು ಜಿರ್ಣಕಾರಿ ಕಿಣ್ವಗಳನ್ನು ಹೊಂದಿದ್ದಉ ಕೀಟಗಳನ್ನು ವಿಘಟಿಸಿ ಅವುಗಳಿಂದ ಸಾರಜನಕವನ್ನು ಪಡೆದುಕೊಳ್ಳುತ್ತವೆ.

            ಭಾರತದಲ್ಲಿ  ಕೀಟಾಹಾರಿ ಸಸ್ಯಗಳು ಹಿಮಾಲಯ ಪರ್ವತ ಶ್ರೇಣೀ, ಅಸ್ಸಾಮ್‌,  ಕರ್ನಾಟಕಗಳಲ್ಲಿ ಕಂಡುಬರುತ್ತವೆ.  ಕೀಟಾಹಾರಿ ಸಸ್ಯಗಳು ಸ್ರವಿಸುವ ಸ್ರವಿಕೆಯಲ್ಲಿ  ಜೀವರಾಸಾಯನಿಕ ವಸ್ತುಗಳು ಮತ್ತು ಜೀರ್ಣ ಕಾರಿ ಕಿಣ್ವಗಳನ್ನು ಹೊಂದಿರುತ್ತವೆ.  ಪ್ರೋಟಿಯೇಸ್‌, ಪರ್‌ ಆಕ್ಸಿಡೇಸ್‌, ಫಾಸ್ಪೇಟೇಸ್‌, ನೇಪ್ರೋಸಿನ್‌, ನೇಪ್ರೋಪಿಂಥಿಸ್‌ ಕ್ವಿನೋನ್ಸ, ಗ್ಲುಕನೇಸ್‌, ನೆಪೆಂಥಿನಸಿಸ್‌,  ಕಿಣ್ವಗಳನ್ನು ಹೊಂದಿರುತ್ತವೆ.


        ಉತ್ತರಾಖಂಡದ ಅರಣ್ಯ ಇಲಾಖೆಯ ಸಂಶೋಧನಾ ವಿಭಾಗದ ಹಲ್ದ್ವಾನಿ ತಂಡವು ಚಮೋಲಿಯ ಗೋಪೇಶ್ವರದಲ್ಲಿ ಕೀಟಾಹಾರಿ ಸಸ್ಯವನ್ನು ಕಂಡುಹಿಡಿದಿದೆ.  ಇದರ ದ್ವಿನಾಮಕರಣ ಯುಟ್ರಿಕ್ಯುಲೇರಿಯಾ ಫರ್ಸೆಲ್ಲಾಟಾ ಎಂಬ ಅಪರೂಪದ ಕೀಟಾಹಾರಿ ಸಸ್ಯವನ್ನು ಕಂಡುಹಿಡಿದಿದೆ.

Comments

Popular posts from this blog

ಸಾಮಾನ್ಯ ಜ್ಞಾನ