ಆಧುನಿಕ ಭಾರತೀಯ ವೈಜ್ಞಾನಿಕ ಪರಂಪರೆ
ಭಾರತವು ಜ್ಞಾನಿಗಳ, ವಿಜ್ಞಾನಿಗಳ ತವರೂರಾಗಿದೆ. ವಿಜ್ಞಾನವು ಸತ್ಯಗಳ ಅಧ್ಯಯನ ಮತ್ತು ನಾವು ಪ್ರಪಂಚದೊಂದಿಗೆ ಸಂವಹನ ನಡೆಸುವ ವಿಧಾನವಾಗಿದೆ. ಇಡೀ ವಿಶ್ವಕ್ಕೆ ಶೂನ್ಯವನ್ನು ಪರಿಚಯಿಸಿದ ಕೀರ್ತಿ ಭಾರತಕ್ಕೆ ಸಲ್ಲುತ್ತದೆ. ಭಾರತದ ವಿಜ್ಞಾನದ ತಳಹದಿಯು ಆಯರ್ಭಟರು, ವರಾಹಮೀರ, ಶುಶ್ರುತ, ಪರಾಷರು, ಕಣಾದ, ಚರಕ ಇಂತಹ ಮಾಹನ ವಿಜ್ಞಾನಿಗಳಿಂದ ನಿರ್ಮಿಸಲ್ಪಟ್ಟಿದೆ.
ವಿಜ್ಞಾನವು ಪ್ರಜ್ಞೆಯಾಗುವುದರೊಂದಿಗೆ , ಸಾಮಾನ್ಯ ಮನೋಧರ್ಮ ವಾಗಬೇಕು. ವಿಜ್ಞಾನವು ಸಮಾಜಮುಖಿಯಾಗಿರಬೇಕು. 1914 ರಲ್ಲಿ ಸ್ಥಾಪಿತವಾದ ಭಾರತೀಯ ವಿಜ್ಞಾನ ಕಾಂಗ್ರೆಸ ಸ್ವಾತಂತ್ರ್ಯ ಪೂವರ್ದಲ್ಲಿ ಭಾರತದಲ್ಲಿ ವಿಜ್ಞಾನಕ್ಕೆ ಒಂದು
ನಿಶ್ಚಿತ ರೂಪ ಕೊಡುವಲ್ಲಿ ಮಹತ್ವದ ಪಾತ್ರ ವಹಿಸಿದೆ.
ಐಸಾಕ್ ನ್ಯೂಟನ್ನನವರ ಮಾತಿನಲ್ಲಿ ಹೇಳುವುದಾದರೆ ́́
ಹಿಂದಿನವರ ಹೆಗಲ ಮೇಲೆ ಕುಳಿತೇ ನಾನು ಮುಂದಿನ ನೋಟವನ್ನು ಪಡೆದಿದೆʼ. ಇದು ನ್ಯೂಟ್ ನರವರ ಹೃದಯ ವೈಶಾಲ್ಯತೆ ತಿಳಿಸುತ್ತದೆ.
ಆಧುನಿಕ ಭಾರತೀಯ ವೈಜಾನಿಕ ಪರಂಪರೆಗೆ ಮೆರಗು ನೀಡಿದ ಅನೇಕ ವಿಜ್ಞಾನಿಗಳು,
ಆಧುನಿಕ ಭಾರತದ ವಿಜ್ಞಾನ ಕೇತ್ರದಲ್ಲಿ ಧ್ರುವ ತಾರೆಯಾಗಿದ್ದಾರೆ. ಅವರಲ್ಲಿ ಏಷ್ಯದಲ್ಲಿಯೇ ಮೊದಲ ನೋಬೆಲ್ ಬಹುಮಾನ ಪಡೆದ ಭಾರತೀಯ ಭೌತ ವಿಜ್ಞಾನಿ ಸರ್ ಸಿ.ವಿ .ರಾಮನ್, ಇವರ ಬೆಳಕಿನ ಚದುರುವಿಕೆಗೆ ಸಂಬಂಧಿಸಿದ ಸಂಶೋಧನೆಗೆ ಇಡಿ
ವಿಶ್ವವೇ ಭಾರತದ ಕಡೆಗೆ ನೋಡುವಂತೆ ಮಾಡಿದ ಸಾಧನೆ ಅವರದು. ಈ ಪ್ರಯೋಗಿಕ್ಕೆ ಅವರು ಖರ್ಚು ಮಾಡಿದ್ದು ಬರೀ 300 ರೂಪಾಯಿ
ಮಾತ್ರ.
ಭಾರತದಲ್ಲಿ ಅನೇಕ ಪ್ರಭಾವ ಶಾಲಿ ವಿಜ್ಞಾನಿಗಳು ರೂಪ ಗೊಂಡಿದ್ದಾರೆ. ಸರ್ ಜಗದೀಶ
ಚಂದ್ರ ಬೋಸ್, ಮೇಘನಾಥ ಸಾಹ, ಹೋಮಿ ಜಹಾಂಗೀರ್ ಬಾಬ್,ವಿಕ್ರಂ ಸಾರಾಭಾಯಿ, ಬೀರಬಲ್ ಸಾಹ್ನಿ, ಎಂ
ಎಸ್ ಸ್ವಾಮಿನಾಥನ, ಸುಬ್ರಮಣ್ಯಂ ಚಂದ್ರಶೇಖರ, ಹರಗೋವಿಂದ ಖುರಾನ , ಎಪಿಜೆ ಅಬ್ದುಲ್ ಕಲಾಮ ಈ ಪಟ್ಟಿಯು ಬೆಳೆಯುತ್ತಲೇ ಹೋಗಬಹುದು.
ಬೈಜಿಕ ಕ್ರಿಯಾಕಾರಕಗಳ ಸ್ಥಾಪನೆಯ ಗುರಿ ಹೊಂದಿದ್ದು , ಅದನ್ನು ಡಾ//
ಹೋಮಿ ಜಹಾಂಗೀರ ಬಾಬ ಪೂರ್ಣ ಗೊಳಿಸಿದರು. ಇವರ ಗರಡಿಯಲ್ಲಿ
ಪಳಗಿದವರು ಕರ್ನಾಟಕದ ವಿಜ್ಞಾನಿಯಾದ ಡಾ. ರಾಜಾ ರಾಮಣ್ಣ.
ಭಾರತದ ಮೊದಲ ಬೈಜಿಕ ಕ್ರಿಯಾಕಾರಕ “ಅಪ್ಸರ” ಸ್ಥಾಪನೆಯಾದದ್ದು ಡಾ. ರಾಜಾ ರಾಮಣ್ಣವರ ನಿರ್ದೇಶನದಲ್ಲಿ.
ವಿಕ್ರಂ ಸಾರಾಭಾಯಿ ಅವರ ನೇತೃತ್ವದಲ್ಲಿ ಭಾರತವು ಬಾಹ್ಯಾಕಾಶ ಯುಗವನ್ನು
ಪ್ರಾರಂಭಿಸಿತು. ಇಸ್ರೋ ಮಹತ್ವದ ಪಾತ್ರ ವಹಿಸಿದೆ.
ಚಂದ್ರಯಾನ,ಮಂಗಳಯಾನ ಇವುಗಳಲ್ಲಿ ಯಶಸ್ಸು ಕಂಡಿದೆ.
ಎಂ. ಎಸ್ ಸ್ವಾಮಿನಾಥನ ಅವರ ಸಾರಥ್ಯದಲ್ಲಿ ಹಸಿರು ಕ್ರಾಂತಿ ಕಂಡಿತು. ಇದರಿಂದ ಭಾರತವು ಕೃಷಿ ಕ್ಷೇತ್ರದಲ್ಲಿ ವೈಜ್ಞಾನಿಕ ಪದ್ಧತಿಗಳನ್ನು
ಅನುಸರಿಸಿ ಅಧಿಕ ಪ್ರಮಾಣದಲ್ಲಿ ಆಹಾರವನ್ನು ಉತ್ಪಾದಿಸಲು
ಸಾಧ್ಯವಾಯಿತು.
ಕೊರೊನಾ ಸಂಧರ್ಬದಲ್ಲಿ ಕೋವಿಡ್ ಲಸಿಕೆಯನ್ನು ಅಭವೃದ್ಧಿ ಪಡಿಸಿ ಸುಮಾರು
90ಕ್ಕೂ ಹೆಚ್ಚು ದೇಶಗಳಿಗೆ 7 ಕೋಟಿಗೂ ಹೆಚ್ಚು ಕೋವಿಡಿ
ಲಸಿಕೆಗಳನ್ನು ನೀಡಿದೆ. ಇದು ಆಧುನಿಕ ಭಾರತದ ವೈಜ್ಞಾನಿಕ ಪರಂಪರೆಯ ಫಲ.
Comments
Post a Comment