ಕರ್ನಾಟಕದ
ವಿಜ್ಞಾನಿ
ಬಿ.ಜಿ.
ಎಲ್ ಸ್ವಾಮಿ
ಕರ್ನಾಟಕವು
ರಸ-ಋಷಿಗಳ, ವಿಜ್ಞಾನಿಗಳ ಬೀಡು. ಕನ್ನಡ ಸಾಹಿತ್ಯ
ಕ್ಷೇತ್ರದಲ್ಲಿ ಕಗ್ಗದ ಮೂಲಕ ಮನೆಮಾತಾಗಿರುವ ಡಾ. ಡಿ.ವಿ.ಜಿಯವರ ಪುತ್ರರೇ ಶ್ರೀ ಬಿ.ಜಿ.ಎಲ್.ಸ್ವಾಮಿ.
ಪೂರ್ಣ ಹೆಸರು ಬೆಂಗಳೂರು ಗುಂಡಪ್ಪ ಲಕ್ಷ್ಮೀನಾರಾಯಣ ಸ್ವಾಮಿ. ಅವರದ್ದು ಬಹುಮುಖ ಪ್ರತಿಭೆ. ಸಸ್ಯ ವಿಜ್ಞಾನಿ, ಜನಪ್ರಿಯ ವಿಜ್ಞಾನ ಲೇಖಕರು. ಸಂಗೀತ, ಚಿತ್ರಕಲೆಗಳಲ್ಲಿ ಆಸಕ್ತಿಯನ್ನು ಹೊಂದಿದ್ದರು,
ಸ್ವತಃ ಚಿತ್ರಗಳನ್ನು ಬರೆಯುತ್ತಿದ್ದರು.
ಇವರ ಜನನ ಫೆಬ್ರುವರಿ 5, 1918ನೆ ಇಸ್ವಿ ತಂದೆ ಡಿವಿಜಿ, ತಾಯಿ ಭಾಗೀರತಿಯವರ
ಸುಪುತ್ರ. ಅವರ ಐದನೆಯ ವಯಸ್ಸಿನಲ್ಲಿ ತಾಯಿ ಬೆಂಕಿ ಅವಘಡದಲ್ಲಿ ಇಹಲೋಕ ತ್ಯಜಿಸಿದರು. ಡಿ.ವಿ.ಜಿಯವರಂಥ ಹಿರಿಯ ಚೇತನದ ಸುಪುತ್ರರಾಗಿ ಬೆಳೆದ ಸ್ವಾಮಿಯವರು
ಹೆಚ್ಚಾಗಿ ತಂದೆಯವರ ಸಾಹಿತ್ಯದಿಂದ ಪ್ರಭಾವಿತರಾದ ವ್ಯಕ್ತಿ.
ಬೆಂಗಳೂರಿನ ಖ್ಯಾತ ನ್ಯಾಷನಲ್ ಹೈಸ್ಕೂಲಿನಲ್ಲಿ 1936 ರಲ್ಲಿ ಪ್ರೌಢ ಶಾಲಾ
ವಿದ್ಯಾಭ್ಯಾಸದ ನಂತರ ಸೆಂಟ್ರಲ್ ಕಾಲೇಜನಲ್ಲಿ ಇಂಟರ್ ಮಿಡಿಯಟ್ ಮುಗಿಸಿದರು.
1939ರಲ್ಲಿ
ಬೆಂಗಳೂರಿನ ಸೆಂಟ್ರಲ್ ಕಾಲೇಜನಿಂದ ಸಸ್ಯ ಶಾಸ್ತ್ರದಲ್ಲಿ B..Sc ಆನರ್ಸ ಪದವಿಯನ್ನು ಪ್ರಥಮ ಶ್ರೇಣಿಯಲ್ಲಿ
ಉತ್ತೀರ್ಣರಾಗಿರುತ್ತಾರೆ. ನಂತರ್, ಎ. ಆರ್ ಕೃಷ್ಣ ಶಾಸ್ತ್ರಿಗಳ ಪ್ರಭಾವದಿಂದ ಸಸ್ಯಶಾಸ್ತ್ರದ
ಕಲಿಕೆಗೆ ಪ್ರೇರಣೆಯಾಗುತ್ತಾರೆ. ಬಳಿಕ 1940ರಲ್ಲಿ
ತಂದೆ ಡಿ.ವಿ.ಜಿಯವರು ಕೊಡಿಸಿದ ಸೂಕ್ಷ್ಮಯಂತ್ರ ಸ್ವಾಮಿಯವರ ಜೀವನದ ಅವಿಭಾಜ್ಯ ಅಂಗವಾಗುತ್ತದೆ. ಅಲ್ಲಿಂದ ಎರಡು ವರ್ಷಗಳು ಕಾಲ ಬೆಂಗಳೂರಿನ ಸಂಶೋಧನಾ ಪ್ರಯೋಗಾಲಯದಲ್ಲಿ ಸಹಾಯಕ ಸಂಶೋಧಕರಾಗಿ ಕಾರ್ಯನಿರ್ವಹಿಸಿ
1947ರಲ್ಲಿ ಡಿ.ಎಸ್ಸಿ ಪದವಿಯನ್ನು ಮೈಸೂರು ವಿಶ್ವವಿದ್ಯಾಲಯದಿಂದ ಪಡೆಯುತ್ತಾರೆ.
ಅದೇ ವರ್ಷ
ಸರಕಾರದಿಂದ ಶಿಷ್ಯ ವೇತನ ಪಡೆದು ಅಮೇರಿಕಾದ ಹಾರ್ವಡ್ ವಿಶ್ವವಿದ್ಯಾಲಯದಲ್ಲಿ ಜಗತ್ಪ್ರಸಿದ್ಧ ವಿಜ್ಞಾನಿಯಾದ
ಪ್ರೋಫೆಸರ್ ಇರ್ವಿಂಗ್ ಬೈಲಿಯ ಹತ್ತಿರ ಸಸ್ಯಶಾಸ್ತ್ರ ಅಧ್ಯಯನ ಮಾಡಲು ತೆರಳಿದರು.
1939
ರಲ್ಲಿ ́ಅರ್ಜೀತ
ಗುಣಗಳು ಅನುವಂಶೀಯತೆಯೋʼ
ಎಂಬ ಪ್ರಥಮ ವೈಜ್ಞಾನಿಕ ಲೇಖನವನ್ನು ಬರೆದರು. ನಂತರ
1944 ರಲ್ಲಿ “ವಿಜ್ಞಾನ ವಿಹಾರ “́ ತಲೆಬರಹದ
ನಾಲ್ಕು ಲೇಖನಗಳು ಬೆಳಕಿಗೆ ತಂದರು. ಬೆಂಗಳೂರಿನ ಭಾರತೀಯ
ವಿಜ್ಞಾನ ಮಂದಿರದಲ್ಲಿ ಸಂಶೋಧಕ ಸಹಾಯ ವೃತ್ತಿಗೆ ಸೇರಿಕೊಂಡರು. ಈ ಅವಧಿಯಲ್ಲಿ ಇಂಗ್ಲೀಷನಲ್ಲಿ ಬರೆದ ಸಸ್ಯ ಶಾಸ್ತ್ರಕ್ಕೆ ಸಂಬಂಧಿಸಿದ ವೈಜ್ಞಾನಿಕ ಲೇಖನಗಳು ಜಗತ್ತಿನ ಸಸ್ಯಶಾಸ್ತ್ರದ ವಿಜ್ಞಾನಿಗಳ ಗಮನ ಸೆಳೆದರು.
ಸಸ್ಯ ಶರೀರ ರಚನಾಶಾಸ್ತ್ರ ಮತ್ತು ಭ್ರೂಣ ಶಾಸ್ತ್ರ. ಸ್ವಾಮಿಯವರ ಪ್ರಮುಖ ಸಂಶೋಧನಾ ಕ್ಷೇತ್ರಗಳು. ವಿವಿಧ ಬಗೆಯ ಸಸ್ಯಗಳನ್ನು ಆಯ್ಕೆ ಮಾಡಿಕೊಂಡು ಈ ಕ್ಷೇತ್ರದಲ್ಲಿ ಸಂಶೋಧನೆಯನ್ನು ಮುಂದುವರೆಸಿದರು.
ವೈಜ್ಞಾನಿಕ
ಸಂಶೋಧನೆ:
ತಮ್ಮ ಸಂಶೋಧನೆಯ ಅವಧಿಯಲ್ಲಿ
ಸ್ವಾಮಿ ಕೆಲವು ಹೊಸ ಸಸ್ಯ ಪ್ರಭೇಧಗಳನ್ನು ಪತ್ತೆ ಹಚ್ಚಿದರು. ಅದರಲ್ಲಿ ಸಾಕ್ಯಾಂಡ್ರಾ(Sarcandra) ಎಂಬ ಜಾತಿಗೆ ಸೇರಿದ್ದು. ಈ ಹೊಸ ಪ್ರಭೇದಕ್ಕೆ ತಮ್ಮ ನೆಚ್ಚಿನ ಗುರುಗಳಾದ ಇರ್ವಿಂಗ್
ಬೇಯ್ಲಿಯವರ ಹೆಸರನ್ನಿಟ್ಟು ಸಾಕ್ಯಾಂಡ್ರಾ ಇರ್ವಿಂಗ್ ಬೇಯ್ಲಿಯೈ (Sarcandra irvingbaileyi
Swamy) ಸ್ವಾಮಿ ಎಂದು ನಾಮಕರಣ ಮಾಡಿದರು. ಅದೇ ರೀತಿ
ಸ್ವಾಮಿ ಕಂಡು ಹಿಡಿದ ಅಸ್ಕಾರೀನ್ (Ascarina) ಗಿಡದ ಹೊಸ ಪ್ರಭೇದಕ್ಕೆ ತಾವು ಅಪಾರವಾಗಿ
ಗೌರವಿಸುತ್ತಿದ್ದ ಪಂಚಾನನ ಮಹೇಶ್ವರಿಯ ಹೆಸರನ್ನಿಟ್ಟರು.
ಅವರ ನೆನಪಿನಲ್ಲಿ ಆಸ್ಕರಿನ ಮಹೇಶ್ವರಿಯೈ( Ascarina maheswarii) ಎಂದು ವೈಜ್ಞಾನಿಕ ನಾಮಕರಣವನ್ನು
ನೀಡಿದ್ದಾರೆ.
1952-54 ಮದ್ರಾಸ
ವಿಶ್ವವಿದ್ಯಾಲಯದಲ್ಲಿ ರಿಸರ್ಚ ಫೆಲೋ ಆಗಿದ್ದರು.
ಮದ್ರಾಸ ಪ್ರೆಸಿಡೆನ್ಸಿ ಕಾಲೇಜಿನಲ್ಲಿ 23 ವರ್ಷ ಸಹಾಯಕ ಪ್ರಾಧ್ಯಾಪಕರಾಗಿ ಸೇವೆಯನ್ನು ಸಲ್ಲಿಸಿದರು. ಸುಮಾರು 250 ಸಂಶೋಧನಾ ಲೇಖನಗಳನ್ನು ಪ್ರಕಟಿಸಿದ್ದಾರೆ.
ತಮಿಳು, ಮಲಾಯಳಂ, ತೆಲಗು, ಲ್ಯಾಟೀನ್, ಸ್ಪಾನೀಷ, ಜರ್ಮನ್ ಹಾಗೂ ಫ್ರೆಂಚ್ ಭಾಷೆ ಬಲ್ಲವರಾಗಿದ್ದರು. 1979-80 ರವರೆಗೆ ಮೈಸೂರು ವಿಶ್ವವಿದ್ಯಾಲಯದಲ್ಲಿ ಸಂದರ್ಶಕ
ಪ್ರಾಧ್ಯಾಪಕರಾಗಿದ ಕಾರ್ಯ ನಿರ್ವಹಿಸಿದರು.
ಲೇಖನಗಳು:
Proceedings
of the National Institute of Science,
Bombay Natural History
Society ಇತ್ಯಾಧಿಗಳಲ್ಲಿ ಪ್ರಕಟನವಾದ ಲೇಖನಗಳು.
·
Endosperfm
in Hypericum mysorensis
·
Homologies
Of embryosacs in Angiosperms̤
·
Inverted Polarity of Embryosacs in Angiosperms
and its relation to the Archegoniate theory
ವಿಜ್ಞಾನ ಸಾಹಿತ್ಯ:
“ ಹಸಿರು ಹೊನ್ನು” ಕೃತಿಯಲ್ಲಿ ಗಿಡ ಮರಗಳ ಪರಿಚಯ, ಸಸ್ಯ ಶಾಸ್ತ್ರದ ಸಾಹಿತ್ಯವಾಗಿ
ಮಾರ್ಪಟ್ಟಿದೆ.
“ ನಮ್ಮ ಹೊಟ್ಟೆಯಲಿ ದಕ್ಷಿಣ ಅಮೇರಿಕಾ” ಆ ದೇಶದಿಂದ ಬಂದ ಸಸ್ಯಗಳ ಕುರಿತು ಪರಿಚಯಿಸಿದ್ದಾರೆ.
ನಾವು ತಿನ್ನುವ ಈರುಳ್ಳಿ, ನೆಲಗಡಲೆ, ಅನೇಕ ತರಕಾರಿಗಳು, ಹಣ್ಣು ಹಂಪಲುಗಳು,
ಗೆಡ್ಡೆ ಗೆಣಸುಗಳು. ನಾವು ಪೂಜಿಸುವ ತುಳಸಿ ನಮ್ಮವಲ್ಲ ಪರದೇಶಿ ಎಂಬ ವಿಸ್ಮಯಕಾರಿ ಅಂಶಗಳನ್ನು ಈ ಪುಸ್ತಕ
ವಿವರಿಸುತ್ತದೆ.
“ ಸಾಕ್ಷಾತ್ಕಾರದ ದಾರಿಯಲ್ಲಿ”, ವೀಳ್ಯದೆಲೆ, ಅಡಿಕೆ , ಅಫೀಮು
ಮೊದಲಾದವುಗಳ ಕುರಿತು ಪುಸ್ತಕಗಳನ್ನು ಬರೆದಿದ್ದಾರೆ.
“ಕಾಲೇಜು ತರಂಗ”, “ಪ್ರಾಧ್ಯಾಪಕರ ಪೀಠದಲ್ಲಿ” “ತಮಿಳು ತಲೆಗಳ ನಡುವೆ”
ಮೊದಲಾದ ಪುಸ್ತಕಗಳಲ್ಲಿ ತಮ್ಮ ವೃತ್ತಿ ಜೀವನದ ಸ್ವಾರಸ್ಯಕರ ಅನುಭವಗಳನ್ನು ವಿವರಿಸಿದ್ದಾರೆ.
ಇವರ ವೈಜ್ಞಾನಿಕ ಲೇಖನಗಳು, ಪುಸ್ತಕಗಳ ಕುರಿತು ಡಾII ಹಾ.ಮಾ ನಾಯಕರ ಅನಿಸಿಕೆ, “ಬಿ.ಜಿ.ಎಲ್. ಸ್ವಾಮಿ ಸಸ್ಯ
ಶಾಸ್ತ್ರಜ್ಞರಾಗಿದ್ದರೂ, ಅವರಲೊಬ್ಬ ನಿಜವಾದ ಕವಿಯಿದ್ದ “ ಎಂದು ಹೇಳಿದರು.
ಬಿ.ಜಿ.ಎಲ್.
ಸ್ವಾಮಿಯವರು ಸಸ್ಯ ವಿಜ್ಞಾನ ಮತ್ತು ಸಾಹಿತ್ಯ ಕ್ಷೇತ್ರದಲ್ಲಿ ಮಾಡಿರುವ ಸಾಧನೆಯಿಂದ ಅವರಿಗೆ ರಾಷ್ಟ್ರೀಯ
ಮತ್ತು ಅಂತರಾಷ್ಟ್ರೀಯ ಮಾನ್ಯತೆಯನ್ನು ತಂದು ಕೊಟ್ಟಿದೆ. 1975 ರಲ್ಲಿ ರಷ್ಯಾದ ಲೆನಿನ್ ಗ್ರಾಡ್
ಅಂತರಾಷ್ಟ್ರೀಯ ಸಸ್ಯ ವಿಜ್ಞಾನ ಸಮ್ಮೇಳನದ ಉಪಾಧ್ಯಕ್ಷರಾಗಿದ್ದರು. 1976 ರಲ್ಲಿ ಅವರಿಗೆ ಬೀರಬಲ್ ಸಹಾನಿ ಸುವರ್ಣ ಪದಕ ಗೌರವ
ಲಭಿಸಿತು. 1978 ರಲ್ಲಿ “ ಹಸಿರು ಹೊನ್ನು “ ಕೃತಿಗೆ
ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಲಭಿಸಿತು.
ಸ್ವಾಮಿಯವರು 1980 ನವೆಂಬರ್ 2 ರಂದು ಹೃದಯಾಘಾತದಿಂದ ನಿಧನರಾದರು.
Comments
Post a Comment